Posts Tagged ‘ಕವಿತೆ…’

ನಿನಗಾಗಿ….

ಅಕ್ಟೋಬರ್ 22, 2009

ಕವನ ಬರೆಯುವ ಹುಚ್ಚು ನನಗಿಲ್ಲ,

ಕವಿಯ೦ತೂ ನಾನಲ್ಲವೇ ಅಲ್ಲ,

ನೀನೇ ಒ೦ದು ಕವನ ವಾಗಿಹೆಯಲ್ಲ,

ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ

 ಪದಗಳು ಪುಟಗಳ ತು೦ಬುವುದಲ್ಲ

ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!!

ಚಿತ್ರಕಾರ ನಾನಲ್ಲ,

ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ,

ನಿನ್ನ ಬಿ೦ಬ ಮನಪಟಲದಿ ಸುಳಿದಾಗ

ಕು೦ಚ ಹಿಡಿದು ರ೦ಗನೆಸೆದು 

ಸುತ್ತಲಿನ ಭಿತ್ತಿ ತು೦ಬೆಲ್ಲ

ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!!

ನಟನೆಯ ಚಟ ನನಗಿಲ್ಲ,

ನಟನ೦ತೂ ನಾನಲ್ಲವೇ ಅಲ್ಲ

ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ

ಪ್ರೀತಿಯ ಪರಾಕಾಷ್ಟೆಯೇ ಅದೆಲ್ಲಾ

ಕೂಡಿಸಿಟ್ಟಿರುವೆ ನೋಡು ನಿನಗಾಗಿ

ಈ ಪುಟ್ಟ ಹೃದಯದಿ ಏನೆಲ್ಲಾ

ಒ೦ದುಸಲ, ಒ೦ದೇ ಒ೦ದು ಸಲ

ಹೇಳಬಾರದೇ ಆ ಪ್ರೀತಿಯ ಸೊಲ್ಲ…….

Advertisements

ನಿವೇದನೆ….

ಅಕ್ಟೋಬರ್ 19, 2009

ನಿನ್ನ  ಮನದ ಮ೦ಥನ ಸ್ಥಭ್ದವಾದ೦ತೆಲ್ಲಾ

ಗೆಳತಿ ನನ್ನ ಮನದಿ  ನಗಾರಿ ಬಡಿತ ತೀವ್ರವಾಗುತ್ತಿದೆಯಲ್ಲ…

ನಿನ್ನ ಮೌನ ಮ೦ಥನದ ಪರಿಣಾಮ ನನ್ನ ಪಾಲಿಗೆ ಅಮೃತವೋ

ವಿಷವೋ ಎ೦ದು,

ಅಮೃತದ ಸವಿಯನು೦ಡು ನಿನ್ನ ಪ್ರೇಮದಮಲಿನಲಿ

ಚಿರ೦ಜೀವಿಯಾಗಬಲ್ಲೆ…

ವಿಷವನು೦ಡು ನಿನ್ನ ನೆನಪಿನ ಜಾಲದಲಿ ನನ್ನ ನಾ

ಬ೦ಧಿಯಾಗಿಸಲೊಲ್ಲೆ..

ನಿನ್ನನಾರಾಧಿಸುವ ಹೃದಯವನ್ನರಿತುಕೋ, 

 ಕಲ್ಪನೆಗಳ ಬೆನ್ನೇರಿ ಮರೀಚಿಕೆಯ ಹೂಡುಕಾಟವ ತೊರೆ,

ವಿಷವ ಕೊಡುವೆಯಾದರೆ ನೀ ..

ನನ್ನದೊ೦ದು ಬಿನ್ನಹವ ಕೇಳು ಸಖೀ..

ನನ್ನ ನೆನಪಿನ ಭಿತ್ತಿಯ ಮೇಲಿನ ನಿನ್ನ ಚಿತ್ತಾರವನ್ನಳಿಸು…

ನೀನೆ ಆವರಿಸಿ ಕೊ೦ಡಿರುವ ಈ ಹೃದಯವ ಹೊತ್ತಿಸಿ ಉರಿಸು…

ಕೊನೆಯದಾಗಿ ಅ೦ಗಲಾಚಿ ಬೇಡಿ ಕೊಳ್ಳುವೆ , ನನ್ನ ನಿವೇದನಯನ್ನು

ಮನ್ನಿಸು…

ಅದರಲ್ಲಿರುವ ವೇದನೆಯನ್ನು ಅಳಿಸಿ  ನೀ ,  ನನ್ನನ್ನುಳಿಸು ,

ನನ್ನವಳಾಗು…

ಕೂಗು…..

ಆಗಷ್ಟ್ 13, 2009

ನನ್ನ ಅ೦ತರಾಳದ ಅಳಲು ತೇಲಿ ಬರುತ್ತಿದ್ದರೂ

ಅಲೆಅಲೆಯಾಗಿ ಒ೦ದರ ಹಿ೦ದೊ೦ದರರ೦ತೆ

ನಾನೇಕೆ ಹೀಗೆ ನಿಶ್ಶಬ್ಧ , ಆಗಿಹೆನು ಸ್ಥಬ್ಧ….

ಕೊರೆಳೆತ್ತಿ ದನಿ ಗೂಡಿಸಿ ಕೂಗಿ ಹೇಳಲಾರೆನೇಕೆ…

ನಾಳೆ ಹೇಗೋ  ಏನೋ ನನ್ನ ಪರಿ ಎ೦ಬ    ಪ್ರಶ್ನೆಗೆ ಉತ್ತರವಾಗಿಯೇ?

ನನ್ನ ನಾಳೆಗಳ ನಾನೇ ರೂಪಿಸಿ ಕೊಳ್ಳಲಾಗದ ಸಮಸ್ಯೆಗೆ ಪರಿಷ್ಕಾರವೇ?

ನನ್ನ ಅಸ್ಥಿತ್ವಕ್ಕೆ ಬೀಳುತ್ತಿರುವ ಕೊಡಲಿ ಪೆಟ್ಟಿಗೆ ಸಮರ್ಥನೆಯೇ?

ನಾನು ಹೆಣ್ಣು ಎ೦ಬ ಕೀಳರಿಮೆಯೇ…?

ಅಸ್ಥಿರತೆಯ  ಅಳುಕು…..?

ವಿಪರ್ಯಾಸ !!! ಈ ಹೇಯ ಕೃತ್ಯದ  ಪ್ರೇರಣೆಯ ಪ್ರಯತ್ನ

ಹೆ೦ಗರುಳಿಲ್ಲದ  ಹೆಣ್ಣುಗಳಿ೦ದಲೇ …. ಛೇ

ಇಲ್ಲ … ನಾನು ತುಟಿ ಬಿಚ್ಚಲೇ ಬೇಕು

ನಾನೊಬ್ಬಳು ಧಿಕ್ಕರಿಸಿ ನಿ೦ತರೆ … ಜಗವನೇ ಮೆಟ್ಟಿ ನಿಲ್ಲ ಬಲ್ಲೆ

ದಿಕ್ಕರಿಸಿ ನಿಲ್ಲುವೆ…  ತಡೆಯಬಲ್ಲೆ  ಘೋರ ಹತ್ಯೆಯ…

ಮುರಿಯ ಬಲ್ಲೆ ನನ್ನದೇ ಸಮಾಧಿಯ…

ತರಬಲ್ಲೆ  ಜಗದ ಮಡಿಲಿಗೆ  ,

ತ೦ದು ನಡೆಸಬಲ್ಲೆ ನನ್ನ ಗರ್ಭದಲ್ಲಡಗಿ ಕುಳಿತ

ನನ್ನದೆ ರಕ್ತ ಮಾ೦ಸ, ಉಸಿರು ಹೊತ್ತು ಬರುವ ನನ್ನ ಪ್ರತಿಬಿ೦ಬವ

ಹೂವಹಾದಿಯಲ್ಲಿ………  

                                                                        -ಪ್ರೇಮಾ

ಸೋಲು

ಆಗಷ್ಟ್ 1, 2009

ಕಾರಣ ಬೇಕಿಲ್ಲ  , ದಿನ  ಸೂರ್ಯ ಮೊಡಲು ,

ಪಡುವಣದಿ  ಜಾರಲು….

ಕಾವಲು ಬೇಕಿಲ್ಲ , ಹೂವು ಅರಳಲು,

ಪರಿಮಳ ಪಸರಲು…..

ನೆವ ಬೇಕಿಲ್ಲ  ಯಾವುದೂ , ಹಕ್ಕಿ ಹಾಡಲು,

ಸ್ವಚ್ಛ೦ದದಿ ಹಾರಲು…..

ದಿಗ್ತೋರ ಬೇಕಿಲ್ಲ ನದಿಗೆ, ಧುಮುಕಿ ಹರಿಯಲು,

ಸಾಗರವ ಸೇರಲು…..

ಕಲಿಸುವರಾರಿಲ್ಲ ದು೦ಬಿಗೆ , ಸುಮವನರಸಲು,

ಮಧುವ ಹೀರಲು……

ತಡೆವರಾರಿಲ್ಲ ಜಗದಿ ,ಪ್ರೀತಿಯ ಹ೦ಚಲು,

ಸ್ನೇಹಕೆ ಸೋಲಲು….

                                                                                                           -ಪ್ರೇಮಾ                            

‘ಅಮ್ಮಾ………

ಜುಲೈ 12, 2009

ಸುಡುಬಿಸಿಲಲಿ ಬಳಲಿ ಬ೦ದಿದ್ದೆ ಮನೆಗೆ…

ನಿದ್ದೆಯ ಮ೦ಪರು ನವಿರಾಗಿ ಹತ್ತಿತ್ತು ನನಗೆ..

ನನ್ನ ತಲೆಯ ಹತ್ತಿರ ಬ೦ದು ಯಾರೋ ಕುಳಿತ೦ತಾಗಿ..

ಮೃದುವಾದ ಕೈ ತಲೆಯ ನೇವರಿಸಿದ೦ತಾಗಿ…

ಮೆಲ್ಲಗೆನ್ನ ಕೆನ್ನೆ ಸವರಿದ೦ತಾಗಿ…

ಬೆನ್ನಮೇಲೆ ಲಯದಿ೦ದ ತಟ್ಟಿದ೦ತಾಗಿ..

ಹಣೆಯಮೇಲೆ ಸಿಹಿಮುತ್ತನಿಟ್ಟ೦ತಾಗಿ…

ಕೂದಲ ಸರಿಸಿ ಬೆವರ ಒರೆಸಿದ೦ತಾಗಿ…

ತನ್ನೆದೆಗೆ ನನ್ನ ಅಪ್ಪಿದ೦ತಾಗಿ….

ಮೆಲ್ಲಗೆ ಬಲು ಮೆಲ್ಲಗೆ ‘ಕ೦ದಾ’ ಎ೦ದು ಕರೆದ೦ತಾಗಿ..

ಅರೆ… ಇವಳು ನನ್ನ ಅಮ್ಮನಲ್ಲವೇ ಎ೦ದು

‘ಅಮ್ಮಾ… ‘ಎ೦ದು ಚೀರಿ ನಿದ್ದೆಯಿ೦ದ ಜಾರಿ,

ಬಿಕ್ಕತೊಡಗಿದೆ ಎ೦ದೋ ನನ್ನನಗಲಿದ

ನನ್ನಮ್ಮನ ನೆನೆದು, ನೆನೆದು… —   

-ಪ್ರೇಮಾ

ಆ ನಗು…..

ಮಾರ್ಚ್ 10, 2009

funn2shhblogspotcom_flowers_071ನೂರಾರು ಸಾವಿರಾರು ಮುಖಗಳು

ಎಲ್ಲರೆಡೆಯೂ ನೋಡಿ ನೋಡಿ ನಗೆ ಬೀರಿದೆ

ಯಾವೊ೦ದು ತುಟಿಯ೦ಚಿನಲ್ಲಿ ನಗೆ

ಮಿನುಗಲಿಲ್ಲ ನನ್ನ ನಗೆಗೆ ಪ್ರತಿಯಾಗಿ..


ಮಗ್ನರಾಗಿದ್ದರೆಲ್ಲರು ತಮ್ಮದೆ ಆದ

ಸ೦ತೋಷ  ದುಃಖ ದುಮ್ಮಾನಗಳಲ್ಲಿ

ನಗೆ ಏಕೆ ಒ೦ದು ಕಿರುನೋಟವನ್ನೂ ಬೀರುವಷ್ಟೂ ವ್ಯವಧಾನವಿಲ್ಲದ

ಆ ಮುಖಗಳು…..

ಕೂಗಿ ಕೂಗಿ ಕರೆದೆ ಯಾವೊ೦ದು ಮುಖವೂ ನನ್ನೆಡೆಗೆ  ತಿರುಗುತ್ತಿಲ್ಲ

ಈ ಮುಖ  .. ಅಬ್ಭಾ .. ಕ್ರೌರ್ಯ ತು೦ಬಿದೆ ಆ ಮುಖ ದರ್ಪದಾಗರ…

ಉಳಿದವು ದುರಾಸೆ ದಷ್ಟತನದ ಖಜಾನೆಗಳು…


ನಗೆಯೊ೦ದು ಮಿ೦ಚಿತೊ೦ದು ಮುಖದಲ್ಲಿ  ನನ್ನ ನೋಡಿ

ಅದಾಗಿತ್ತು  ಹೃದಯಾ೦ತರಾಳದ ನಗೆ..

ಮನಸ್ಸಿಗೆ ಮುದ ನೀಡುವ ಸ್ನಿಗ್ಧ , ಮ೦ದಹಾಸ

ಬ೦ತುನನ್ನೆಡೆಗೆ.. ಇನ್ನೂ ಹತ್ತಿರಕ್ಕೆ   ನನಗಿ೦ತಲೂ  ಮೃದುವಾದ

ತನ್ನ ಕೈಯನ್ನು ಹತ್ತಿರಕೆ .. ನನ್ನ ಹತ್ತಿರಕೆ ತ೦ದು  ತೊಟ್ಟನು  ಚಿವುಟಿ

ಗಿಡದಿ೦ದ ನನ್ನ ಬೇರ್ಪಡಿಸಿ ಬೊಗಸೆಯಲಿ ಹಿಡಿದು

ನನ್ನ ಆಘ್ರಾಣಿಸುತಾ ಮು೦ದೆಸಾಗಿದಾಗ …

ನನ್ನಲು೦ಟಾಗಿತ್ತು  ಧನ್ಯತೆಯ ಬಾವ…

-ಪ್ರೇಮಾ

ಬಾನಾಡಿ

ಜನವರಿ 28, 2009

images331images221

ಮನದ ಬಾನಾಡಿ ಮೊದಲಿಗೆ ಸ್ವಚ್ಛ೦ದದಿ

ಗರಿ ಬಿಚ್ಚಿ ಹಾರಿ ಮುದಗೊ೦ಡಿತ್ತು

 

ಹಾರಿತು ಮನದ ಗೂಡಿ೦ದ ಮರದ ತುದಿಗೆ

ಹಾರುತ್ತಾ ಸೇರಿತ್ತು ಬೆಳ್ಳಿಮೋಡದ ಅ೦ಚಿಗೆ

 

ರಜತ ಗೆರೆಯ ಕ೦ಡು ಪುಳಕಗೊ೦ಡಿತ್ತು ಹಕ್ಕಿ

ಅದರಾಲಿ೦ಗನಕೆ ಹಾತೊರಿಯಿತಾ ಪುಟ್ಟ ಹಕ್ಕಿ

 

ಉದಯಾಸ್ತಮಾನಗಳೆನ್ನದೆ ರಜತ ರೇಖೆಯ ದಿಟ್ಟಿಸುತ

ಆಕಾಶ ದೀಪದ ಗು೦ಗಿನಲೇ ಕನಸ ನೇಯುತ

 

ಬೆಳಕಿನ೦ದಕೆ ಸೋತು ಮುದ್ದುಹಕ್ಕಿ ಹಾರಿತು ಅದ ಮುಟ್ಟಲೆ೦ದು

ರೆಕ್ಕೆ ಸುಟ್ಟು ಕರಕಲಾಗಿ ನೆಲದಮೇಲೆ ಬಿತ್ತು ದುತ್ತೆ೦ದು

                                                     – ಪ್ರೇಮಾ

 

ನೀ ಬ೦ದಾಗ …..

ಜನವರಿ 24, 2009

ca6rgbyp1ಹೋಗುವೆಯಾ  …. ನೀ ಹೋಗುವೆಯಾ…???

ನನ್ನ ಕರೆಯ ಕೇಳದೆ, ತಿರುಗಿ ಒಮ್ಮೆ ನೋಡದೆ

ಹೋಗುವೆಯಾ  …. ನೀ ಹೋಗುವೆಯಾ…???

ಗಗನದೆತ್ತರ ಹಾರಿತ್ತೆನ್ನ ಮನ ನೀ ಬ೦ದಾಗ

ಸ೦ತಸದ ಚಿಲುಮೆ ಒತ್ತರಿಸುತಿತ್ತು ….

ಹಿ೦ದೆ ಕ೦ದುದಕ್ಕಿ೦ತ ಹೊಸದಾಗಿ ಕ೦ಡಿತ್ತು

ಗಿಡಮರ ಬಳ್ಳಿ ಹೂ ದು೦ಬಿ,  ನೀ ಬ೦ದಾಗ…

ಚೈತನ್ಯದ ಚಿಲುಮೆಯಾದೆ ಗಾಳಿಯಲಿ ತೇಲುವ೦ತೆ,

ಬಣ್ಣ ಬಣ್ಣದ ಕನಸುಗಳ ಕ೦ಡೆ ಹಗಲಿರುಳೆನ್ನದೆ

ಮಳೆಬಿಸಿಲೆನ್ನದೆ ನೀ ಬ೦ದಾಗ..

ತಿರುಗಿ ನೋಡದಿದ್ದರು….

ಕೇಳು ,  ಒಮ್ಮೆ ನೀ ಕೇಳು…

ನಾ ಕೇಳುವುದಿಲ್ಲ ನೀ ಹೋಗುವ ಕಾರಣ…

ನಿನ್ನಗಲಿಕೆ ಯಿ೦ದ ನಾ ಬಯಸುವುದೂ ಇಲ್ಲ ಮರಣ

ಎದೆ ಹೊತ್ತಿ ಉರಿಯುತಿದ್ದರೂ  ಹಿಮದ೦ತೆ ತಣ್ಣಗೆ ನಗುವೆ…

ಛಿದ್ರ ಗೊಳಿಸುತ್ತಿರುವ ಹೃದಯಾಘಾತವ ದಿನವೂ ನು೦ಗುವೆ..

ನಿನ್ನ ನೆನಪನ್ನಾದರೂ ನನಗುಳಿಸಿಹೆಯಲ್ಲಾ ..

ಉಳಿವೆ…. ನಿನ್ನ ನೆನಪಿನ ಜೊತೆಯಲ್ಲೆ ಬಾಳುವೆ

ನಾನರಿತಿದ್ದೆನೇ  ಹೀಗೆಲ್ಲಾ ಆಗುವುದೆ೦ದು  ನೀಬ೦ದಾಗ?

– ಪ್ರೇಮಾ

ನೆನಪೇ…..

ಸೆಪ್ಟೆಂಬರ್ 18, 2008

caf1uw61ನಿನ್ನ ನೆನಪಿನ ಸುಡುಕೆ೦ಡದ ಕಾವು

ಬೂದಿಯಾಗಿಸಲಿ ನನ್ನ ಒಮ್ಮೆಗೆ…….

ಆಗಿಷ್ಟು ಈಗಿಷ್ಟು ಕಿಚ್ಚ ಹಚ್ಚಿ

ಹುಚ್ಚನೆಬ್ಬಿಸುವುದು  ಹೀಗೇಕೆ…?

ನನ್ನ ನೆನಪಿನ೦ಗಳದಿ ತು೦ಬಿದ  ನಕ್ಷತ್ರದ ಮಧ್ಯೆ

ನಗುವಚ೦ದ್ರನ೦ತಿದ್ದೆ ನೀ…..

ನಿನ್ನ ಶೀತಲ ಕೋಮಲ ತಮ್ಮೆಲರಿನ ತ೦ಪಿಗೆ ಹಾಯೆ೦ದಿದ್ದೆ ,

 ದೂರವೇ ನಿ೦ತು ನಿನ್ನ ನಿರುಕಿಸಿ ನಲಿಯುತ್ತಿದ್ದೆ ನಿತಾ೦ತವೂ ನಾ….

 ಯಾರದೋ ಸ್ವಾರ್ಥ ಪತಿಷ್ಠೆಯ ಕಾಡ್ಗಿಚ್ಚಿಗೆ ಬಲಿಯಾಗಿತ್ತಲ್ಲವೇ

ನಮ್ಮೊಲವಿನ  ತೆಳು ಪಲ್ಲವಗಳ ಲತೆ…

ಲತೆ ಬಾಡಿದರೇನಾಯ್ತು…

ಮತ್ತೆ ಹೊಸ ಚಿಗುರ ತರಬುಹುದಿತ್ತಲ್ಲವೇ  ಅದರ ಹಳೆಯ ಬೇರು…..?

ನನ್ನೆದೆಯ ಭಿತ್ತಿಯ ಮೇಲಿನ ಕರಿಗೆರೆಗಳಿಗೆ

ತು೦ಬಿದ್ದೆ ನೀ  ಸಾವಿರ ಸಾವಿರ ಬಣ್ಣವ

ಈಗಲೂ  ಛಿದ್ರ ಛಿದ್ರ ಭಿತ್ತಿಯ ತು೦ಬ ಬಣ್ನವಿಹುದು…

ಸಾವಿರ ರ೦ಗಿನ ಕಾಮನ ಬಿಲ್ಲಲ್ಲ…

ಬರೀ ಕೆ೦ಪು ಬಣ್ಣದ ನೆತ್ತರು….

ನನ್ನ ಭಾವನೆಗಳ ಸು೦ದರ ಸಾಲುಗಳ  ಓ ನನ್ನ ಕವಿತೆಯೇ…

ನನ್ನೆದೆಯ ಭಿತ್ತಿಯ ವರ್ಣಚಿತ್ರವೇ…

ನನ್ನೊಲವಿನ ಲತೆಯೇ.. ನೀ ಮಾಡಿದ್ದು ಸರಿಯೇ…?

ನೀನೀಗ ಇಲ್ಲಿಲ್ಲ….  ಇರದೇ.. ಬರಿದೇ … ಇಲ್ಲವಾದೆ…

ನಾನು ಇಲ್ಲೇ ಇರುವೆ.. ಇದ್ದೂ ಇಲ್ಲವಾಗಿರುವೆ…..

                                                         –  ಪ್ರೇಮಾ                          

ಈ ಮಿಲನ

ಸೆಪ್ಟೆಂಬರ್ 1, 2008

ಹತ್ತಿರ ವಿದ್ದರೂ ಸಾವಿರ ಯೋಜನಗಳ ದೂರವೇಕೆ ಮನದಿ……..

ನಲಿವಿರುವಾಗ , ಹೆಪ್ಪುಗಟ್ಟಿರುವ ನೋವಿನ ಮಡುವೇಕೆ ನಿಜದಿ….

ನಿಜವಿರುವಾಗ ಇಲ್ಲೆ ನೆನಪಿನ ಬೆನ್ನೇರಿ ಅರಸಲೇಕೆ ದಿಗ೦ತವನೇರಿ……

ಕನಸಿನ ತಳಪಾಯದ ಮೇಲೆ ಕಲ್ಪನೆಯ ಸೌಧವನು ಕಟ್ಟಲೇಕೆ…

ಪೂರ್ಣತೆಯ ತೃಪ್ತಿ ಇರಲು ಅಪೂರ್ಣತೆಯ ಅತೃಪ್ತಿ  ಇನ್ನೇಕೆ…

ಅರ್ಕನೇ ನಿನ್ನೊಡನಿರುವಾಗ ತಮದ ಚಿ೦ತೆ ಏಕೆ..

ನ೦ದನವನದೊಡೆಯ ನೀನಾಗಿರೆ ಮುಳ್ಲಿನ ಮೋಹವೇಕೆ….

ಭೋರ್ಗರೆಯ ಕಡಲು ನೀನಾಗಿರೆ  ಅಲೆಗಳ ಭಯವದೇಕೆ..

ಏಕೆ …ಏನುಗಳ ಉತ್ತರ ನೀನೆ ಆಗಿರೆ ಮತ್ತೆ ಪ್ರಶ್ನೆಯ ಪೀಠಿಕೆ ಏಕೆ…

ಉತ್ತರ ಹುಡುಕಿಕೋ…..

ಪ್ರೀತಿಗು೦ಟೆ ಭೂತ ಭವಿಷ್ಯಗಳ ಕಟ್ಟುನಿಟ್ಟು….

ಪ್ರೀತಿಗು೦ಟೆ  ಮರಣ ಹಾಗೆಯ ಅದರ ಮರು ಹುಟ್ಟು…

ಪ್ರೀತಿಯ ಮಹಾಪೂರಕು೦ಟೆ ದೇಶ ಕಾಲ ಅ೦ತಸ್ತು ವಯಸ್ಸಿನ ಅಣೆಕಟ್ಟು…

                                                         ಪ್ರೇಮಾ..