ನಿನಗಾಗಿ….

ಕವನ ಬರೆಯುವ ಹುಚ್ಚು ನನಗಿಲ್ಲ,

ಕವಿಯ೦ತೂ ನಾನಲ್ಲವೇ ಅಲ್ಲ,

ನೀನೇ ಒ೦ದು ಕವನ ವಾಗಿಹೆಯಲ್ಲ,

ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ

 ಪದಗಳು ಪುಟಗಳ ತು೦ಬುವುದಲ್ಲ

ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!!

ಚಿತ್ರಕಾರ ನಾನಲ್ಲ,

ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ,

ನಿನ್ನ ಬಿ೦ಬ ಮನಪಟಲದಿ ಸುಳಿದಾಗ

ಕು೦ಚ ಹಿಡಿದು ರ೦ಗನೆಸೆದು 

ಸುತ್ತಲಿನ ಭಿತ್ತಿ ತು೦ಬೆಲ್ಲ

ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!!

ನಟನೆಯ ಚಟ ನನಗಿಲ್ಲ,

ನಟನ೦ತೂ ನಾನಲ್ಲವೇ ಅಲ್ಲ

ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ

ಪ್ರೀತಿಯ ಪರಾಕಾಷ್ಟೆಯೇ ಅದೆಲ್ಲಾ

ಕೂಡಿಸಿಟ್ಟಿರುವೆ ನೋಡು ನಿನಗಾಗಿ

ಈ ಪುಟ್ಟ ಹೃದಯದಿ ಏನೆಲ್ಲಾ

ಒ೦ದುಸಲ, ಒ೦ದೇ ಒ೦ದು ಸಲ

ಹೇಳಬಾರದೇ ಆ ಪ್ರೀತಿಯ ಸೊಲ್ಲ…….

Advertisements

1 Comment »

 1. 1
  ಕವಿತೆಯ ಒಡೆಯ? Says:

  ಏನೋ ಹುಡುಕುತ ಹೊರಟ ನನಗೆ,
  ಕೊನೆಗೆ ಸಿಕ್ಕಿದ್ದು ಈ ನಿನ್ನ ಪುಟ..
  ಆ ಪುಟವನ್ನು ನೋಡಲು ಮೊದಲು ಕಂಡದ್ದು,
  “ನಿನಗಾಗಿ” ಎಂಬ ಮುದ್ದಾದ ಹಣೆಬರಹ..

  ಈ ಕವಿತೆ ನನಗಾಗಿಯೇ?

  ಅಲ್ಲೇ ನಿಂತೆ ನೋಡಿದೆ,
  ನೋಡ ನೋಡುತ ಅರಳಿದವು,
  ಈ ಕವಿತೆಯ ಪದಪುಂಜಗಳ
  ಪ್ರತಿಬಿಂಬ, ನನ್ನ ಅಕ್ಷಿ ಪಟಲಗಳೊಳಗೆ

  ಈ ಕವಿತೆ ನನಗಾಗಿಯೇ?

  ಅವು ಪದಗಳೇ? ಪ್ರತಿಬಿಂಬಗಳೇ?
  ಅಥವಾ, ನನ್ನ ಮನದಾಳದಲ್ಲಡಗಿರುವ,
  ಭಾವ ತರಂಗಗಳನ್ನೆಬ್ಬಿಸಿ, ಕಡಡಿಸಿ
  ಮೀಟಲೆತ್ನಿಸುತ್ತಿರುವ ಪ್ರೇಮ ತರಂಗಗಳೇ?

  ಈ ಕವಿತೆ ನನಗಾಗಿಯೇ?

  ಕವಿಯಾಗುವ ಹುಚ್ಚೋ.. ನಟಿಯಾಗಲು ಮೆಚ್ಚೋ,
  ನಿನ್ನ ಮನದಲ್ಲಿ ಮೂಡುತ್ತಿರುವ ವಿಚಿತ್ರ ಕಲೆಯೋ ನಾ ಅರಿಯೆ,
  ಬೇಡಿ, ಕಾಡಿ, ನರಳಾಡುತ್ತಿದ್ದರೂ ಸಿಗದಾಯಿತು ಅತಿ ಎತ್ತರದ ಉತ್ತರ,
  ನನ್ನಳೊಗೆ ಹುಟ್ಟಿ, ನನ್ನಳೊಗೆ ಬೆಳೆದು, ನನ್ನನ್ನೇ ಹಿಂಡುತ್ತಿರುವ ಬಲು ಚಿಕ್ಕ ಪ್ರಶ್ನೆಗೆ..

  ಈ ಕವಿತೆ ನಿಜವಾಗಲೂ “ನನಗಾಗಿಯೇ”?


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: