August 13, 2009
ನನ್ನ ಅ೦ತರಾಳದ ಅಳಲು ತೇಲಿ ಬರುತ್ತಿದ್ದರೂ
ಅಲೆಅಲೆಯಾಗಿ ಒ೦ದರ ಹಿ೦ದೊ೦ದರರ೦ತೆ
ನಾನೇಕೆ ಹೀಗೆ ನಿಶ್ಶಬ್ಧ , ಆಗಿಹೆನು ಸ್ಥಬ್ಧ….
ಕೊರೆಳೆತ್ತಿ ದನಿ ಗೂಡಿಸಿ ಕೂಗಿ ಹೇಳಲಾರೆನೇಕೆ…
ನಾಳೆ ಹೇಗೋ ಏನೋ ನನ್ನ ಪರಿ ಎ೦ಬ ಪ್ರಶ್ನೆಗೆ ಉತ್ತರವಾಗಿಯೇ?
ನನ್ನ ನಾಳೆಗಳ ನಾನೇ ರೂಪಿಸಿ ಕೊಳ್ಳಲಾಗದ ಸಮಸ್ಯೆಗೆ ಪರಿಷ್ಕಾರವೇ?
ನನ್ನ ಅಸ್ಥಿತ್ವಕ್ಕೆ ಬೀಳುತ್ತಿರುವ ಕೊಡಲಿ ಪೆಟ್ಟಿಗೆ ಸಮರ್ಥನೆಯೇ?
ನಾನು ಹೆಣ್ಣು ಎ೦ಬ ಕೀಳರಿಮೆಯೇ…?
ಅಸ್ಥಿರತೆಯ ಅಳುಕು…..?
ವಿಪರ್ಯಾಸ !!! ಈ ಹೇಯ ಕೃತ್ಯದ ಪ್ರೇರಣೆಯ ಪ್ರಯತ್ನ
ಹೆ೦ಗರುಳಿಲ್ಲದ ಹೆಣ್ಣುಗಳಿ೦ದಲೇ …. ಛೇ
ಇಲ್ಲ … ನಾನು ತುಟಿ ಬಿಚ್ಚಲೇ ಬೇಕು
ನಾನೊಬ್ಬಳು ಧಿಕ್ಕರಿಸಿ ನಿ೦ತರೆ … ಜಗವನೇ ಮೆಟ್ಟಿ ನಿಲ್ಲ ಬಲ್ಲೆ
ದಿಕ್ಕರಿಸಿ ನಿಲ್ಲುವೆ… ತಡೆಯಬಲ್ಲೆ ಘೋರ ಹತ್ಯೆಯ…
ಮುರಿಯ ಬಲ್ಲೆ ನನ್ನದೇ ಸಮಾಧಿಯ…
ತರಬಲ್ಲೆ ಜಗದ ಮಡಿಲಿಗೆ ,
ತ೦ದು ನಡೆಸಬಲ್ಲೆ ನನ್ನ ಗರ್ಭದಲ್ಲಡಗಿ ಕುಳಿತ
ನನ್ನದೆ ರಕ್ತ ಮಾ೦ಸ, ಉಸಿರು ಹೊತ್ತು ಬರುವ ನನ್ನ ಪ್ರತಿಬಿ೦ಬವ
ಹೂವಹಾದಿಯಲ್ಲಿ………
-ಪ್ರೇಮಾ
Posted in Uncategorized | Tags: ಕವಿತೆ... |
August 4, 2009
ಸಾವಿರ ನದಿಗಳು ಒ೦ದಾಗಿ ಸೇರಿದರೂ
ಕಡಲಾಗಲಾರದು ನಿಜ….
ನದಿಗಳು ಕಡಲೆಡೆಗೆ ಹರಿಯದಿದ್ದರೆ
ಕಡಲ ಅಸ್ಥಿತ್ವವಿರುತ್ತದೆಯೇ?
Posted in Uncategorized | Tags: ಹನಿಗವನ |
August 1, 2009
ಕಾರಣ ಬೇಕಿಲ್ಲ , ದಿನ ಸೂರ್ಯ ಮೊಡಲು ,
ಪಡುವಣದಿ ಜಾರಲು….
ಕಾವಲು ಬೇಕಿಲ್ಲ , ಹೂವು ಅರಳಲು,
ಪರಿಮಳ ಪಸರಲು…..
ನೆವ ಬೇಕಿಲ್ಲ ಯಾವುದೂ , ಹಕ್ಕಿ ಹಾಡಲು,
ಸ್ವಚ್ಛ೦ದದಿ ಹಾರಲು…..
ದಿಗ್ತೋರ ಬೇಕಿಲ್ಲ ನದಿಗೆ, ಧುಮುಕಿ ಹರಿಯಲು,
ಸಾಗರವ ಸೇರಲು…..
ಕಲಿಸುವರಾರಿಲ್ಲ ದು೦ಬಿಗೆ , ಸುಮವನರಸಲು,
ಮಧುವ ಹೀರಲು……
ತಡೆವರಾರಿಲ್ಲ ಜಗದಿ ,ಪ್ರೀತಿಯ ಹ೦ಚಲು,
ಸ್ನೇಹಕೆ ಸೋಲಲು….
-ಪ್ರೇಮಾ
Posted in Uncategorized | Tags: ಕವಿತೆ... |
August 1, 2009
ನಿನ್ನ ಅಳಲಿಗೆ ಬಲ್ಲೆ ನಾ ಕಾರಣ
ಇ೦ದು ತಡವಾಗಿ ಬರುವ ನಿನ್ನ ಅರುಣ
ತಪ್ಪಿಲ್ಲ ಅವನಿಗೂ ಅ೦ಬರದಿ ಗ್ರಹಣ…..
- ಪ್ರೇಮಾ
Posted in Uncategorized | Tags: ಹನಿಗವನ |
July 16, 2009
ನೀ ನನಗೆ ಬೆನ್ನು ಮಾಡಿ ಹೊರಟೆ ಗಾವುದ ಗಾವುದಗಳಷ್ಟು ದೂರ…
ದೂರ ಬಲು ದೂರದಲ್ಲಿರುವೆ , ದೃಷ್ಟಿಗೂ ನಿಲುಕದಷ್ಟು, ನಮ್ಮ ನಡುವಿನ ಅ೦ತರ…
ನನ್ನಲ್ಲಿಯೇ ಬಿಟ್ಟು ಹೋಗಿರುವೆ ನಿನ್ನ ನೆನಪಿನ ಇ೦ಚರ….
ತಾರೆಗಳಾಚೆಯಿ೦ದ ಈ ನೈದಿಲೆಯ ಒಮ್ಮೆ ನೊಡೋ ಚ೦ದಿರ…
– ಪ್ರೇಮಾ
Posted in Uncategorized | Tags: ಹನಿಗವನ |
July 12, 2009
ಸುಡುಬಿಸಿಲಲಿ ಬಳಲಿ ಬ೦ದಿದ್ದೆ ಮನೆಗೆ…
ನಿದ್ದೆಯ ಮ೦ಪರು ನವಿರಾಗಿ ಹತ್ತಿತ್ತು ನನಗೆ..
ನನ್ನ ತಲೆಯ ಹತ್ತಿರ ಬ೦ದು ಯಾರೋ ಕುಳಿತ೦ತಾಗಿ..
ಮೃದುವಾದ ಕೈ ತಲೆಯ ನೇವರಿಸಿದ೦ತಾಗಿ…
ಮೆಲ್ಲಗೆನ್ನ ಕೆನ್ನೆ ಸವರಿದ೦ತಾಗಿ…
ಬೆನ್ನಮೇಲೆ ಲಯದಿ೦ದ ತಟ್ಟಿದ೦ತಾಗಿ..
ಹಣೆಯಮೇಲೆ ಸಿಹಿಮುತ್ತನಿಟ್ಟ೦ತಾಗಿ…
ಕೂದಲ ಸರಿಸಿ ಬೆವರ ಒರೆಸಿದ೦ತಾಗಿ…
ತನ್ನೆದೆಗೆ ನನ್ನ ಅಪ್ಪಿದ೦ತಾಗಿ….
ಮೆಲ್ಲಗೆ ಬಲು ಮೆಲ್ಲಗೆ ‘ಕ೦ದಾ’ ಎ೦ದು ಕರೆದ೦ತಾಗಿ..
ಅರೆ… ಇವಳು ನನ್ನ ಅಮ್ಮನಲ್ಲವೇ ಎ೦ದು
‘ಅಮ್ಮಾ… ‘ಎ೦ದು ಚೀರಿ ನಿದ್ದೆಯಿ೦ದ ಜಾರಿ,
ಬಿಕ್ಕತೊಡಗಿದೆ ಎ೦ದೋ ನನ್ನನಗಲಿದ
ನನ್ನಮ್ಮನ ನೆನೆದು, ನೆನೆದು… –
-ಪ್ರೇಮಾ
Posted in Uncategorized | Tags: ಕವಿತೆ... |
March 16, 2009
ಕತ್ತಲೋಡೀಸಿ ಬೆಳಕ ಕೊಡುವ ದೀಪದಲಿ
ಉರಿಯುವ ಬತ್ತಿ, ಉರಿಸುವ ಎಣ್ಣೆ ಇಲ್ಲದಿರೆ
ಬರೀ ಕರೀ ಕತ್ತಲೆಯೇ ಅದರಲಿ…
ದೀಪಕೆ ಸಲ್ಲುವ ಗೌರವಾದರಗಳು
ತನ್ನನೇ ಉರಿಸಿ ಬೆಳಕನೀಯುವ ಎಣ್ಣೆಬತ್ತಿಗಳಿಗೇಕೆ ಸಲ್ಲದಿಲ್ಲಿ…?
-ಪ್ರೇಮಾ
Posted in Uncategorized | Tags: ಹನಿಗವನ |
March 10, 2009

ನಗೆಯ ಪರದೆಯ ಹಿ೦ದೆ ಅಡಗಿದ ನೋವು ,
ಅವನಿಯ ಗರ್ಭದಿ ಹರಿವ ಲಾವಾರಸದ೦ತೆ…
ಪ್ರೀತಿ ತು೦ಬಿದ ಒ೦ದೇ ಒ೦ದು ನುಡಿಮಾತ್ರಕ್ಕೆ
ಕರಗಿ , ಹೊರಹೊಮ್ಮಿ , ಶೀತಲವಾಗಿ,
ಹರಿದು , ಪ್ರಶಾ೦ತ ವಾಗಬಲ್ಲುದಲ್ಲವೆ ….
-ಪ್ರೇಮಾ
Posted in Uncategorized | Tags: ಹನಿಗವನ |
March 10, 2009
ನೂರಾರು ಸಾವಿರಾರು ಮುಖಗಳು
ಎಲ್ಲರೆಡೆಯೂ ನೋಡಿ ನೋಡಿ ನಗೆ ಬೀರಿದೆ
ಯಾವೊ೦ದು ತುಟಿಯ೦ಚಿನಲ್ಲಿ ನಗೆ
ಮಿನುಗಲಿಲ್ಲ ನನ್ನ ನಗೆಗೆ ಪ್ರತಿಯಾಗಿ..
ಮಗ್ನರಾಗಿದ್ದರೆಲ್ಲರು ತಮ್ಮದೆ ಆದ
ಸ೦ತೋಷ ದುಃಖ ದುಮ್ಮಾನಗಳಲ್ಲಿ
ನಗೆ ಏಕೆ ಒ೦ದು ಕಿರುನೋಟವನ್ನೂ ಬೀರುವಷ್ಟೂ ವ್ಯವಧಾನವಿಲ್ಲದ
ಆ ಮುಖಗಳು…..
ಕೂಗಿ ಕೂಗಿ ಕರೆದೆ ಯಾವೊ೦ದು ಮುಖವೂ ನನ್ನೆಡೆಗೆ ತಿರುಗುತ್ತಿಲ್ಲ
ಈ ಮುಖ .. ಅಬ್ಭಾ .. ಕ್ರೌರ್ಯ ತು೦ಬಿದೆ ಆ ಮುಖ ದರ್ಪದಾಗರ…
ಉಳಿದವು ದುರಾಸೆ ದಷ್ಟತನದ ಖಜಾನೆಗಳು…
ನಗೆಯೊ೦ದು ಮಿ೦ಚಿತೊ೦ದು ಮುಖದಲ್ಲಿ ನನ್ನ ನೋಡಿ
ಅದಾಗಿತ್ತು ಹೃದಯಾ೦ತರಾಳದ ನಗೆ..
ಮನಸ್ಸಿಗೆ ಮುದ ನೀಡುವ ಸ್ನಿಗ್ಧ , ಮ೦ದಹಾಸ
ಬ೦ತುನನ್ನೆಡೆಗೆ.. ಇನ್ನೂ ಹತ್ತಿರಕ್ಕೆ ನನಗಿ೦ತಲೂ ಮೃದುವಾದ
ತನ್ನ ಕೈಯನ್ನು ಹತ್ತಿರಕೆ .. ನನ್ನ ಹತ್ತಿರಕೆ ತ೦ದು ತೊಟ್ಟನು ಚಿವುಟಿ
ಗಿಡದಿ೦ದ ನನ್ನ ಬೇರ್ಪಡಿಸಿ ಬೊಗಸೆಯಲಿ ಹಿಡಿದು
ನನ್ನ ಆಘ್ರಾಣಿಸುತಾ ಮು೦ದೆಸಾಗಿದಾಗ …
ನನ್ನಲು೦ಟಾಗಿತ್ತು ಧನ್ಯತೆಯ ಬಾವ…
-ಪ್ರೇಮಾ
Posted in Uncategorized | Tags: ಕವಿತೆ... |
February 17, 2009
ಹೇ ಶರಧೀ …
ಹುಣ್ಣಿಮೆ ಬ೦ತೆ೦ದು ಉಬ್ಬಿ ಉಕ್ಕದಿರು…
ಕಾರಿರುಳು ಕಾದಿಹುದೆ೦ಬುದ ಮರೆಯದಿರು…
ಬೆಳದಿ೦ಗಳ ಸ್ವಾಮಿತ್ವ ನಿನದೇ ಎ೦ದು ಮೆರೆಯದಿರು…
ದೂರದ ಮಿಣುಕು ದೀಪದ ಸ್ನೇಹವ ತೊರೆಯದಿರು…
-ಪ್ರೇಮಾ
Posted in Uncategorized | Tags: ಹನಿಗವನ |