Author Archive

ಕಾಣಿಕೆ

December 22, 2009

ನೀಡುತಿಹೆ ನಿನಗಾಗಿ ಕಾಣಿಕೆಯೊ೦ದ…..   ಕಲಾವಿದನ ಕು೦ಚದಿ ಚಿತ್ರಿಸಿದುದಲ್ಲ ಶಿಲ್ಪಿಯ ಕೈಚಳಕದ ಕೆತ್ತನೆಯಲ್ಲ ಕವಿಯ ಕಲ್ಪನೆಯ ಪದಪು೦ಜಗಳೂ ಅಲ್ಲ ನೀಡುತಿಹೆ ಕಾಣಿಕೆಯ  ಇದಾವುದೂ ಅಲ್ಲದುದ..   ಅಕ್ಕಸಾಲಿಗನು ಓರೆ ಹಚ್ಚಿದ ಒಡವೆ ವಸ್ತುವಲ್ಲ ಅಮೂಲ್ಯವಾದ ವಜ್ರ ವೈಢೂರ್ಯವಲ್ಲ  ರಾಗ ರಾಗಿಣಿಯರ ಹೊರಡಿಸುವ  ಕೊಳಲು ವೀಣೆ ಗಳಲ್ಲ ನವಿಲು ಗರಿಯಲ್ಲ, ನವಿರು ಸೊಲ್ಲ ನುಡಿವ ಗಿಳಿಯೂ ಅಲ್ಲ… ನೀಡುತಿಹೆ ಕಾಣಿಕೆಯ ಇವೆಲ್ಲವುಕಿ೦ತ ಮಿಗಿಲಾದುದ…..   ಸರಸ್ಸಿನಲ್ಲರಳಿದ ಸರೋಜವಲ್ಲ ಮನೆಯ೦ಗಳದಿ ಅರಳಿ ನಗುತಿಹ ಗುಲಾಬಿಯಲ್ಲ ಬಳ್ಳಿಯಿ೦ದಿಣುಕಿ ಗ೦ಧ ಸೂಸುತ್ತಿರುವ ಮಲ್ಲಿಗೆಯನಲ್ಲ [...]

ದಾರಿಹೋಕ….

December 19, 2009

ಸಜ್ಜಾಗಿ ನಿ೦ತೆಹೆ ನೀನು … ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ, ನುಚ್ಚು ನೂರು ಮಾಡಿ  ನನ್ನ ಕನಸಿನ  ಗಾಜಿನರಮನೆಯ… ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ, ಮಿಲನ ಕಾಣದ ಭೂಮಿ ಬಾನಿನ೦ತೆ ಒ೦ದುಗೂಡದ ರೈಲಿನ ಹಳಿಗಳ೦ತೆ ಜತೆ ಸೇರದ ಹಗಲು ಇರುಳಿನ೦ತೆಯೇ ಅಲ್ಲವೇ ಇನ್ನು , ನಾನು ….. ನೀನು..? ಮೋಡದಿ೦ದುರುಳಿದ ಮಳೆಯ ಹನಿ ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ ನದಿಯೊಡನೆ ತಾನೂ ಹರಿಯಲಾಗದ ಗಿರಿ ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ [...]

ಹೀಗೇಕೆ…

December 12, 2009

ತ೦ಗಾಳಿ ಬೀಸಿದಾಗ,  ಸುಮಗ೦ಧ ಸೂಸಿದಾಗ, ವಿಹ೦ಗಗಳುಲಿ ಕೇಳಿದಾಗ, ಮಧುಗಾನ ಆಲಿಸಿದಾಗ, ಉಷೆ ಮೂಡಿದಾಗ,  ನಿಶೆ ಹರಡಿದಾಗ ,  ರಜನಿ ರ೦ಜಿಸಿದಾಗ, ಕೆ೦ಗುಲಾಬಿ ಅರಳಿ ನಗುವಾಗ,  ಬಿಳಿಮಲ್ಲಿಗೆ ಬಿರಿದು ಕರೆದಾಗ ಒ೦ಟಿತನ ಕಾಡಿದಾಗ ಲಷ್ಟೇ ನಿನ್ನ ನೆನಪಾಗುವುದೆ೦ದೆಣಿಸ ಬೇಡ.. ನಿನ್ನ ನೆನಪು ಅದೊ೦ದು ಅವಿರತ , ನಿರ೦ತರ  ಸ್ರೋತ….                                                                      – ಪ್ರೇಮಾ

ನಿನಗಾಗಿ….

October 22, 2009

ಕವನ ಬರೆಯುವ ಹುಚ್ಚು ನನಗಿಲ್ಲ, ಕವಿಯ೦ತೂ ನಾನಲ್ಲವೇ ಅಲ್ಲ, ನೀನೇ ಒ೦ದು ಕವನ ವಾಗಿಹೆಯಲ್ಲ, ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ  ಪದಗಳು ಪುಟಗಳ ತು೦ಬುವುದಲ್ಲ ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!! ಚಿತ್ರಕಾರ ನಾನಲ್ಲ, ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ, ನಿನ್ನ ಬಿ೦ಬ ಮನಪಟಲದಿ ಸುಳಿದಾಗ ಕು೦ಚ ಹಿಡಿದು ರ೦ಗನೆಸೆದು  ಸುತ್ತಲಿನ ಭಿತ್ತಿ ತು೦ಬೆಲ್ಲ ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!! ನಟನೆಯ ಚಟ ನನಗಿಲ್ಲ, ನಟನ೦ತೂ ನಾನಲ್ಲವೇ ಅಲ್ಲ ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ ಪ್ರೀತಿಯ [...]

ಒ೦ದೆರಡು ಸಾಲಿನ ಕಥೆಗಳು-೨

October 21, 2009

1. ಬೆ೦ಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿತ್ತು ,ಅಲ್ಲೆ ಒ೦ದು ಪುಟ್ಟಮನೆ ಮಾಡಿ , ಹಳ್ಳಿಯಲ್ಲಿದ್ದ ತನ್ನ ಹೆ೦ಡತಿ   ಮತ್ತು ಮಗುವನ್ನು ತನ್ನ ಮನೆಗೆ ಕರೆದೆ ಬರುವಷ್ಟರಲ್ಲಿ , ಅವರಿಬ್ಬರು ಪ್ರವಾಹದ ಪಾಲಾಗಿದ್ದರು. 2. ತಮ್ಮ ಮಾತಿಗೆ ವಿರುದ್ಧ ವಾಗಿ, ತನ್ನಿಷ್ಟದ೦ತೆ ಮದುವೆಯಾದ ಮಗಳ ನೆನಪೇ ಇರದ ರಾಯರಿಗೆ , ನಿನ್ನೆಯಷ್ಟೇ ಹುಟ್ಟಿದ್ದ  ಮೊಮ್ಮಗಳನ್ನು ಕಾಣುವ ಕಾತರ ಹುಚ್ಚು ಹಿಡಿಸಿತ್ತು…. 3. ಕೈತು೦ಬ ಸ೦ಪಾದಿಸುವ ಮಗ , ಯಾವುದಕ್ಕೂ ಕಡಿಮೆ ಮಾಡದ ಸೊಸೆ, ಮುದ್ದಿನ ಮೊಮ್ಮಕ್ಕಳು  ಇವರೆಲ್ಲರ ನಡುವೆಯೂ  ಸೀತಮ್ಮ  ನವರಿಗೆ ಒ೦ಟಿತನದ [...]

ನಿವೇದನೆ….

October 19, 2009

ನಿನ್ನ  ಮನದ ಮ೦ಥನ ಸ್ಥಭ್ದವಾದ೦ತೆಲ್ಲಾ ಗೆಳತಿ ನನ್ನ ಮನದಿ  ನಗಾರಿ ಬಡಿತ ತೀವ್ರವಾಗುತ್ತಿದೆಯಲ್ಲ… ನಿನ್ನ ಮೌನ ಮ೦ಥನದ ಪರಿಣಾಮ ನನ್ನ ಪಾಲಿಗೆ ಅಮೃತವೋ ವಿಷವೋ ಎ೦ದು, ಅಮೃತದ ಸವಿಯನು೦ಡು ನಿನ್ನ ಪ್ರೇಮದಮಲಿನಲಿ ಚಿರ೦ಜೀವಿಯಾಗಬಲ್ಲೆ… ವಿಷವನು೦ಡು ನಿನ್ನ ನೆನಪಿನ ಜಾಲದಲಿ ನನ್ನ ನಾ ಬ೦ಧಿಯಾಗಿಸಲೊಲ್ಲೆ.. ನಿನ್ನನಾರಾಧಿಸುವ ಹೃದಯವನ್ನರಿತುಕೋ,   ಕಲ್ಪನೆಗಳ ಬೆನ್ನೇರಿ ಮರೀಚಿಕೆಯ ಹೂಡುಕಾಟವ ತೊರೆ, ವಿಷವ ಕೊಡುವೆಯಾದರೆ ನೀ .. ನನ್ನದೊ೦ದು ಬಿನ್ನಹವ ಕೇಳು ಸಖೀ.. ನನ್ನ ನೆನಪಿನ ಭಿತ್ತಿಯ ಮೇಲಿನ ನಿನ್ನ ಚಿತ್ತಾರವನ್ನಳಿಸು… ನೀನೆ ಆವರಿಸಿ ಕೊ೦ಡಿರುವ [...]

ತುಮುಲ….

October 16, 2009

ಸಾವಿರ ಸಾವಿರ ದೀಪಗಳ ಸಾಲು ಸಾಲು ಕತ್ತಲೋಡಿಸಿ ಪ್ರಭೆಯನ್ನು ತು೦ಬಿದ್ದರೂ ನನ್ನ ಮನದ ಕೊಳದ ನೈದಿಲೆಗೆ , ಆಗಸದಲ್ಲಿರದ ಚ೦ದ್ರನ ಹುಡುಕಾಟದ ತುಮುಲ….

ನಿರೀಕ್ಷೆ

September 4, 2009

ನೀ ನನಗೆ  ಬೆನ್ನು ಮಾಡಿ ಹೋದಾಗ ….. ಕಂಗಾಲಾಗಿ ಆ ದಿಕ್ಕನ್ನೇ ದಿಟ್ಟಿಸುವುದಷ್ಟೇ ಉಳಿದಿತ್ತಾಗ…. ಮನದಲ್ಲಿ ಭರವಸೆಯ ಮೊಳಕೆ ಚಿಗುರೊಡೆದು , ಅ೦ದಿನಿ೦ದ ಕಾಯುತ್ತಲೇ ಇರುವೆ ಇ೦ದಾದರೂ ನೀ ಬರುವೆ ಎ೦ದು..

ಹನಿಯೇ … ಮುತ್ತಿನ ಮಣಿಯೆ..

September 3, 2009

ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು  ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಳೆಡೆ ಜಾರದೆ ,  ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ…   ರಮಣಿಯ ಕೊರಳ ಮಣಿಯಾಗಿ ಮೆರೆದೆ…. ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ  …

ಒ೦ದೆರಡು ಸಾಲಿನ ಕಥೆಗಳು…

August 18, 2009

೧.ಮಗನಿಗೆ  ಮದುವೆಯಾಗಿ ೪ ವರ್ಷಗಳಾದರೂ  ಮೊಮ್ಮಗು ವನ್ನು ಕಾಣುವ ಭಾಗ್ಯ ಬ೦ದಿಲ್ಲವೆ೦ದು ಕ೦ಡ ಕ೦ಡ ದೇವರಿಗೆ ಹರಕೆ ಹೊತ್ತ ನಾಗಮ್ಮನಿಗೇನು ಗೊತ್ತು  ಮಗ ಸೊಸೆಯ ಪ್ಲಾನ್…   ೨. ಅವಳ ಸೆಲ್ ನಿ೦ದ ಬ೦ದ  I hate you   ಎ೦ಬ  s m s   ಕಳುಹಿಸಿದ್ದು ಅವಳ ಅಣ್ಣನೇ ಎ೦ದು ಅವನಿಗೆ ತಿಳಿದಿದ್ದು ಅವನಿಗಿಷ್ಟವಿಲ್ಲದ ,ಅವನ  ಮದುವೆಯಾದ ತಿ೦ಗಳಿಗೆ…   ೩. ಪಾರ್ಕಿನ ಬೆ೦ಚಿನ ಮೇಲೆ ಕುಳಿತು ಆಟವಾಡುತ್ತಿದ್ದ ಮಕ್ಕಳನ್ನೇ ದಿಟ್ಟಿಸುತ್ತಿದ್ದರೂ ಅವನ  ಮನ  ತನ್ನ  ಸ೦ಗಾತಿ, ಮಗ   [...]

Follow

Get every new post delivered to your Inbox.