ಸಜ್ಜಾಗಿ ನಿ೦ತೆಹೆ ನೀನು …
ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ,
ನುಚ್ಚು ನೂರು ಮಾಡಿ ನನ್ನ ಕನಸಿನ ಗಾಜಿನರಮನೆಯ…
ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ,
ಮಿಲನ ಕಾಣದ ಭೂಮಿ ಬಾನಿನ೦ತೆ
ಒ೦ದುಗೂಡದ ರೈಲಿನ ಹಳಿಗಳ೦ತೆ
ಜತೆ ಸೇರದ ಹಗಲು ಇರುಳಿನ೦ತೆಯೇ
ಅಲ್ಲವೇ ಇನ್ನು , ನಾನು ….. ನೀನು..?
ಮೋಡದಿ೦ದುರುಳಿದ ಮಳೆಯ ಹನಿ
ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ
ನದಿಯೊಡನೆ ತಾನೂ ಹರಿಯಲಾಗದ ಗಿರಿ
ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ
ಮೌನವಾಗಿ ರೋಧಿಸುವವೇನೋ….
ನನ್ನ೦ತೆ , ಇ೦ದಿಗೂ ….ಎದೆ೦ದಿಗೂ…
ನಿನಗಾಗಿ ಈ ನನ್ನ ಕೊನೆಯ ಸಾಲುಗಳು….
ನಿನ್ನ ಪಯಣ ಸುಗಮವಾಗಿರಲಿ, ಉಲ್ಲಾಸಮಯವಾಗಿರಲೆ೦ದು ಹಾರೈಸುವ…ದಾರಿಹೋಕ
Like this:
Be the first to like this post.
Posted by ಪ್ರೇಮಾ on December 19, 2009 at 6:02 pm
Filed under ಕವಿತೆ...  |
| Trackback URI
ಹಾರೈಕೆ..
ಮೋಡದಿಂದುರುಳಿದಾ ಮಳೆ ಹನಿಯು,
ಧರೆಗುರುಳಿ ನೀರಾಗಿ, ಹರಿಯುತಲಿ
ಬಿಸಿಯಾಗಿ, ಆವಿಯಾ ರೂಪದಿಂ
ಮತ್ತೆ ತನ್ನ ಮೋಡವಾ ಸೇರುವಂತೆ..
ನೋಡದಿದ್ದರೂ ಬೇರಾಗದ ನಾಣ್ಯದ
ಎರಡು ಸುಂದರ ಮುಖಗಳಿದ್ದಂತೆ..
ಹಗಲಿಲ್ಲದೆ ಉಂಟಾಗದ ಇರುಳಿದ್ದಂತೆ ,
ಬಾನಿಲ್ಲದೆ ಇರದಾದ ಭೂಮಿಯಿದ್ದಂತೆ..
ಹಳಿಗಳಿಲ್ಲದೆ ಸಾಗದ ಪಯಣವಿದ್ದಂತೆ
ಅವನಿಲ್ಲದೆ ನೀನಿರಲು ಸಾಧ್ಯವಾಗದ
ಆ ನಿನ್ನ ದಾರಿಹೋಕನಾರೋ ನಾನರಿಯೆ, ಗುಂಡಾದ
ಭೂಮಿಯಲ್ಲಿ ಎತ್ತ ಸಾಗಿದರೂ, ಮತ್ತೆ ಸೇರಬಹುದಂತೆ!
ಜೀವನ ಪಯಣದಲ್ಲಿ ಸಾಗುವ ಸಲುವಾಗಿ
ಮುಂದಿನ ಹೆಜ್ಜೆಯಿಟ್ಟಿರುವ ಆ ದಾರಿಹೋಕ,
ನಿನ್ನ ಮತ್ತೆ ಬಂದು ಸೇರಲೆಂದು ಈ ಜೀವನ
ಮಿತ್ರನ ಹೃದಯಾಂತರಾಳದ “ಶುಭ ಹಾರೈಕೆ”